Site icon PowerTV

ತೆಂಗಿನಕಾಯಿಯಲ್ಲಿ ಮೂಡಿಬಂದ ಬಸವ

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಬಸವ ರೂಪಿ ಕಾಣಿಸಿಕೊಂಡಿದ್ದು, ತೆಂಗಿನಕಾಯಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.

ಮೈಸೂರಿನ ಹಿನಕಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನಕಾಯಿಗೆ ಭಾವ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಹಿನಕಲ್‌ನ ನನ್ನೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಶಿವಲಿಂಗದ ಮುಂದಿಟ್ಟು ಜನ ಹೂ, ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸಿದ್ದಾರೆ.

ಸುಲಿದ ತೆಂಗಿನಕಾಯಿ ಮೊಳಕೆ ಒಡೆದು ಬಸವನ ಮೂರ್ತಿಯ ರೂಪ ಹೊರಬಂದಿದೆ. ಅದು ಬಸವನ ರೀತಿಯ ಮುಖ ಹಾಗೂ ಕೊಂಬುಗಳ ರೂಪ ಪಡೆದುಕೊಂಡಿದೆ. ಅದನ್ನು ಜನ ಬಸವ ದೇವರ ಸ್ವರೂಪಿ ಎಂದು ಪೂಜೆ ಮಾಡಿದ್ದಾರೆ.

Exit mobile version