Site icon PowerTV

ನಾವು ಸುಮ್ಮನೆ ಕೂರುವವರಲ್ಲ : ಡಿಕೆ ಶಿವಕುಮಾರ್‌

ಬೆಂಗಳೂರು : ನಾವು ಸಿಎಂ‌ ಭೇಟಿ ಮಾಡಲು ಹೋಗುವುದು ನೆಂಟಸ್ಥಿಕೆ ‌ಮಾಡಲು ಅಲ್ಲ. ನಾವೇನು ಮಾಡುತ್ತೇವೆ ಎನ್ನುವುದನ್ನು ನೀವು ನೋಡ್ತಾ ಇರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಹೇಳಿದರು.

ಈ ಮೂಲಕ ಕೋವಿಡ್ ಮಾರ್ಗಸೂಚಿ ಪಾಲನೆ‌ ಮಾಡದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕುವಂತೆ ಸಿಎಂ‌ ಮನೆ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂಬುದನ್ನು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾಯುತ್ತಿದ್ದೇನೆ, ಅವರು ಮೈಸೂರಿಗೆ ಹೋಗಿದ್ದಾರೆ. ಏನು ಮಾಡಬೇಕು ಅಲ್ಲಿಗೆ ಹೋಗಿ ಮಾಡುತ್ತಿದ್ದೇವೆ. ಈಗಾಗಲೇ ಸಿಎಸ್‌ಗೆ ಪತ್ರ ಬರೆದಿದ್ದೇನೆ. ಈಗ ಸಹಿ ಹಾಕಿದ್ದೇನೆ. ನಾವು ಸುಮ್ಮನೆ ಕುಳಿತುಕೊಳ್ಳುವವರಲ್ಲ ನೀವು ನೋಡುತ್ತಿರಿ ಎಂದು ಡಿ‌ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Exit mobile version