Site icon PowerTV

ಅಂಕಿತಾ ಅಮರ್​​ ಬೆಳ್ಳಿತೆರೆಗೆ ಎಂಟ್ರಿ

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮೀರಾ ಪಾತ್ರ ಮಾಡಿದ್ದ ನಟಿ ಅಂಕಿತಾ ಅಮರ್ ಅವರು “ಅಬ ಜಬ ದಬ” ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ್ ಗೊತ್ತಿಲ್ಲ’ ಸಿನಿಮಾ ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ ಅವರು ಎರಡನೇ ಸಿನಿಮಾವಾಗಿ ‘ಅಬ ಜಬ ದಬ’ ಮಾಡುತ್ತಿದ್ದಾರೆ. ಇದೊಂದು ಕಾಮಿಡಿ ಮತ್ತು ಫ್ಯಾಂಟಸಿ ಅಂಶಗಳಿರುವ ಸಿನಿಮಾವಂತೆ. ಈ ಸಿನಿಮಾದಲ್ಲಿ ಶಂಕರ್ ನಾಗ್ ಇರುತ್ತಾರೆ, ಆದರೆ ಶಂಕರ್ ನಾಗ್ ಹೇಗೆ ಇರುತ್ತಾರೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು ಎಂದು ಸಿನಿಮಾ ತಂಡ ಟ್ವಿಸ್ಟ್ ಇಟ್ಟಿದೆ.

ನಟ ಪ್ರಥ್ವಿ ಅಂಬರ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಲಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರತಂಡ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು, ಪೋಸ್ಟರ್​ನಲ್ಲಿ ಅಂಕಿತಾ ಅಮರ್ ಮೈಕ್ ಹಿಡಿದಿದ್ದು, ಬ್ಯಾಕ್ ಗ್ರೌಂಡ್ ನಲ್ಲಿ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯ ಅವರ ಚಿತ್ರವಿದೆ.

Exit mobile version