Site icon PowerTV

ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟು ಹಾಕಿದ ಕಿಡಿಗೇಡಿಗಳು

ಅಫ್ಘಾನಿಸ್ತಾನ :ಆಫ್ಘಾನ್ ಸಂಗೀತಗಾರನ ಮುಂದೆಯೇ ತಾಲಿಬಾನ್ ಸಿಬ್ಬಂದಿ ಆತನ ವಾದ್ಯವನ್ನು ಸುಟ್ಟುಹಾಕಿದ್ದಾನೆ.

ಅಫ್ಘಾನಿಸ್ತಾನದಲ್ಲಿ ಸಂಗೀತಗಾರನ ಮುಂದೆಯೇ ತಾಲಿಬಾನ್ ಸಂಗೀತ ವಾದ್ಯವನ್ನು ಸುಟ್ಟು ಹಾಕಿರುವುದರ ಕುರಿತ ವೀಡಿಯೋವನ್ನು ಅಲ್ಲಿನ ವರದಿಗಾರ ಟ್ವಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಸಂಗೀತ ವಾದ್ಯ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಇದನ್ನು ನೋಡಿ ಸಂಗೀತಗಾರ ಅಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.ಅಫ್ಘಾನಿಸ್ತಾನದ ಹಿರಿಯ ವರದಿಗಾರ ಅಬ್ದುಲ್ ಹಕ್ ಒಮೆರಿ ಟ್ವಿಟ್ಟರ್ ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಂದೂಕು ಹಿಡಿದ ಸಿಬ್ಬಂದಿ, ಅಳುತ್ತಿದ್ದ ಸಂಗೀತಗಾರನನ್ನು ನೋಡಿ ನಗುತ್ತಿರುವ ದೃಶ್ಯ ಸಹ ಸೆರೆಯಾಗಿದೆ. ಇದನ್ನು ನೋಡಿದ ನೆಟ್ಟಿಗರು ತಾಲಿಬಾನ್ ಕ್ರೂರತೆ ಎಷ್ಟರ ಮಟ್ಟಿಗೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version