Site icon PowerTV

ಕೊತ್ತಂಬರಿ ಎಸೆದು ರೈತರ ಆಕ್ರೋಶ

ವಿಜಯಪುರ : ರಾಜ್ಯಾದ್ಯಂತ ಕೊರೋನಾ ಮತ್ತು ಒಮೈಕ್ರಾನ್ ತಡೆಗೆ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದೆ..ವೀಕೆಂಡ್ ಕರ್ಫ್ಯೂ ನೆಪದಲ್ಲಿ ಮಾರಾಟಕ್ಕೆ ಅಡ್ಡಿ ಆರೋಪ ಮಾಡಿ ಮೆಂತ್ಯ, ಕೊತ್ತಂಬರಿ ಸೊಪ್ಪು ರಸ್ತೆಗೆ ಎಸೆದು ರೈತ ಆಕ್ರೋಶ ಹೊರ ಹಾಕಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೂ ಪೊಲೀಸರು ನಮಗೆ ಅಡ್ಡಪಡಿಸುತ್ತಿದ್ದಾರೆ..ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದರೂ ನಮಗೆ ಪೊಲೀಸರು ಕಿರಿಕಿರಿ ನೀಡುತ್ತಾರೆಂದು ರೈತ ಆರೋಪಿಸಿದ್ದಾರೆ. ಜಮೀನಿನಲ್ಲಿ ಸಾಲ ಸೋಲ‌ ಮಾಡಿ ಬೆಳೆದ ತರಕಾರಿ ಹಾಗೂ ಸೊಪ್ಪನ್ನು ಮಾರಲು ಬಿಡುತ್ತಿಲ್ಲ ಎಂದು ಅಸಮಾಧಾನ‌ ಹೊರಹಾಕಿದ್ದು, ಅನಗತ್ಯವಾಗಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

Exit mobile version