Site icon PowerTV

ದೇಶದ ಸೇನಾಪಡೆಗೆ ನೂತನ ಸಮವಸ್ತ್ರ

ದೇಶ : ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಮತ್ತು ಅಧಿಕಾರಿಗಳಿಗೆ ಹದಿನಾಲ್ಕು ವರ್ಷಗಳ ನಂತರ ಹೊಸ ವಿನ್ಯಾಸದ ಸಮವಸ್ತ್ರ ದೊರೆತಿದೆ.

ಸೇನಾ ದಿನವಾದ ಶನಿವಾರ ಬಿಡುಗಡೆ ಮಾಡಲಾಗಿದ್ದು, ಹಂತಹಂತವಾಗಿ ಸೇನಾಪಡೆಯಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ನೀಡಲಾಗುತ್ತದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ..ಬದಲಾದ ಕಾಲಘಟ್ಟದ ಅಗತ್ಯ ಹಾಗೂ ವೈರಿಗಳ ಕಣ್ಣುತಪ್ಪಿಸಲು ಹೆಚ್ಚು ನೆರವಿಗೆ ಬರುವ ರೀತಿಯಲ್ಲಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಫ್ಯಾಷನ್‌ ಟೆಕ್ನಾಲಜಿ ಸಂಸ್ಥೆ ಇದನ್ನು ವಿನ್ಯಾಸಗೊಳಿಸಿದೆ. NIFT ವಿನ್ಯಾಸಗೊಳಿಸಿದ್ದ 15 ಕ್ಯಾಮಫ್ಲಾಜ್‌ ಮಾದರಿ, 4 ವಿನ್ಯಾಸ, 8 ರೀತಿಯ ಬಟ್ಟೆಯಲ್ಲಿ ಅಂತಿಮವಾಗಿ ಒಂದನ್ನು ಸೇನಾಪಡೆ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

Exit mobile version