Site icon PowerTV

ಬೆಳಗಾವಿಯಲ್ಲಿ ವೈದ್ಯೆ ಮಾಸ್ಕ್​ಗೆ ಕಿರಿಕ್..!

ಬೆಳಗಾವಿ : ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ಡಿಸಿಪಿ ಜತೆ ವೈದ್ಯೆ ಕಿರಿಕ್ ಮಾಡಿದ ಘಟನೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.

ಕಾರಿನಲ್ಲಿ ಮಾಸ್ಕ್ ಹಾಕದೇ ವೈದ್ಯೆ, ಡ್ರೈವರ್ ಹೋಗುತ್ತಿದ್ದರು. ಈ ವೇಳೆ ವೈದ್ಯೆಯ ಕಾರು ತಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಮಾಸ್ಕ್ ಹಾಕದ ವೈದ್ಯೆ, ಚಾಲಕನಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಡಿಸಿಪಿ ರವೀಂದ್ರ, ಎಸಿಪಿ ಸದಾಶಿವ ಕಟ್ಟಿಮನಿ ಸಲಹೆ ನೀಡಿದರು. ಇದಕ್ಕೆ ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ. ನಿಮ್ಮ ಪೊಲೀಸರು ಮಾಸ್ಕ್ ಹಾಕಿಲ್ಲ ಅಂತ ವೈದ್ಯೆ ಮೊಂಡುವಾದ ಮಾಡಿದ್ದಾರೆ. ಅಲ್ಲದೆ ಕೈಮುಗಿದು ಹೋದ ವೈದ್ಯೆಗೆ, ದೊಡ್ಡ ನಮಸ್ಕಾರ ಹೋಗಮ್ಮ ಅಂತ ಡಿಸಿಪಿ ಹೇಳಿದ್ದಾರೆ.

Exit mobile version