Site icon PowerTV

ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ

ದೇಶ : ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡವು, ನ್ಯೂಜಿಲೆಂಡ್‌ಗೆ ತೆರಳುವ ಮೊದಲು ಭಾನುವಾರ ಮುಂಬೈನಲ್ಲಿ ಸೇರಲಿದ್ದು, ಒಂದು ವಾರ ಕ್ವಾರಂಟೈಂನ್​​​​ನಲ್ಲಿ ಇರಲಿದೆ.

ತಂಡದ 15 ಮಂದಿ ಸದಸ್ಯರು ಮತ್ತು ಮೂವರು ಕಾಯ್ದಿರಿಸಿದ ಆಟಗಾರ್ತಿಯರನ್ನು ಮುಂಬೈನಲ್ಲಿ ಸೇರುವಂತೆ ತಿಳಿಸಲಾಗಿದ್ದು, ಒಂದು ವಾರದವರೆಗೆ ಪ್ರತ್ಯೇಕ ವಾಸದಲ್ಲಿರಲಿದ್ದಾರೆ. ತಂಡವು ಇದೇ 24ರಂದು ನ್ಯೂಜಿಲೆಂಡ್‌ಗೆ ತೆರಳುವ ನಿರೀಕ್ಷೆಯಲ್ಲಿದ್ದು. ಅಲ್ಲಿಗೆ ತೆರಳಿದ ಬಳಿಕ ಮತ್ತೊಂದು ಬಾರಿ ಕ್ವಾರಂಟೀನ್‌ಗೆ ಒಳಗಾಗಬೇಕಾಗುತ್ತದೆ. ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮೊದಲು ಫೆಬ್ರವರಿ 11ರಿಂದ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಸರಣಿ ಮತ್ತು ಒಂದು ಟಿ-20 ಪಂದ್ಯವನ್ನು ಆಡಲಿದೆ.

Exit mobile version