Site icon PowerTV

ಬಿಕೋ ಎನ್ನುತ್ತಿದೆ ಕೆಂಪೇಗೌಡ ಬಸ್ ನಿಲ್ದಾಣ

ಬೆಂಗಳೂರು : ರಾಜ್ಯದಲ್ಲಿ ಎರಡನೇ ದಿನದ ವೀಕೆಂಡ್ ಕರ್ಫ್ಯೂ ಈಗಾಗಲೇ ಜಾರಿಯಲ್ಲಿದ್ದು, ಮೆಜೆಸ್ಟಿಕ್ ಸಂಪೂರ್ಣ ಭಣ ಭಣ ಎನ್ನುತ್ತಿದೆ.

ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು,ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ಸೇವೆ ಲಭ್ಯವಿದ್ದರೂ ಪ್ರಯಾಣಿಕರಿಲ್ಲದೆ ಬಸ್ ಸ್ಟಾಂಡ್ ಬಿಕೋ ಎನ್ನುತ್ತಿತ್ತು. ಪ್ರಯಾಣಿಕರಿಗಾಗಿ ಗಂಟೆಗಟ್ಟಲೆ ಕಾದರೂ ಬಸ್ ತುಂಬುತ್ತಿಲ್ಲ. ಮೆಜೆಸ್ಟಿಕ್​ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಸೇವೆ ಪ್ರಯಾಣಿಕರು ಬಾರದ ಕಾರಣದಿಂದ ಕೆಎಸ್ಆರ್ಟಿಸಿ ಖಾಲಿ ಖಾಲಿಯಾಗಿದೆ.

Exit mobile version