Site icon PowerTV

ಬೆಕ್ಕಾಬಿಟ್ಟಿ ರೋಡ್​​ಗಿಳಿದವರಿಗೆ ಬೀಳುತ್ತೆ ಗೂಸಾ

ಹುಬ್ಬಳ್ಳಿ : ಇಂದು ವಿಕೇಂಡ್ ಕರ್ಪ್ಯೂ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿ ಪೊಲೀಸರು ಫಿಲ್ಡಿಗಿಳಿದಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಮತ್ತು ಬೆಕ್ಕಾಬಿಟ್ಟಿ ರಸ್ತೆಗಿಳಿದವರಿಗೆ ದಂಡಾಸ್ತ್ರ ಪ್ರಯೋಗದ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಕೆಟ್ ಕಂಪ್ಲೀಟ್ ಬಂದ್ ಆಗಿವೆ. ದುರ್ಗದ ಬೈಲ್, ಜನತಾ ಬಜಾರ್ ಸೇರಿದಂತೆ ವಿವಿಧ ಮಾರ್ಕೆಟ್ ಗಳಲ್ಲಿ ಕಠಿಣ ರೂಲ್ಸ್ ಜಾರಿ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿರುವುದರಿಂದ ಜನರ ಸಂಚಾರಕ್ಕೆ ಬ್ರೇಕ್ ಬಿದಿದೆ.

ಬಸ್ ಸಂಚಾರ ಎಂದಿನಂತೆ ಶುರುವಾದರೂ ವಿರಳವಾಗಿವೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚರಿಸುತ್ತಿವೆ. ಆದ್ರೂ ನಗರ ಸಾರಿಗೆ ಹಾಗೂ ಅಂತರ ಜಿಲ್ಲಾ ಸಾರಿಗೆ ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಸಂಚರಿಸುತ್ತಿವೆ.

Exit mobile version