Site icon PowerTV

ರಚಿತಾಗೆ ಟಾಲಿವುಡ್​ ಫಿದಾ

ರಾಜ್ಯ : ಸ್ಯಾಂಡಲ್​ವುಡ್​​​ ಡಿಂಪಲ್ ಕ್ವೀನ್ ರಚಿತಾ ರಾಮ್‌ ಸದ್ಯ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಮಾಡಿದ ರಚಿತಾ ರಾಮ್, ಈಗ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತೆಲುಗು ನೆಲದಲ್ಲಿ ಮಿಂಚೋಕೆ ರೆಡಿಯಾದ ರೌಡಿ ಬೇಬಿ ರಚ್ಚು, ಯಾವುದೋ ಒಂದು ರೀತಿಯ ಪಾತ್ರಕ್ಕೆ ಸೀಮಿತ ಆಗಿಲ್ಲ. ಮೊದಲೆಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸುತ್ತಿದ್ದ ರಚಿತಾ ಈಗ ವಿಭಿನ್ನ ಪಾತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ತೆಲುಗಿನ ಸೂಪರ್ ಮಚ್ಚಿ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ.

Exit mobile version