Site icon PowerTV

ಬಂದ್ರು ಕದ್ರು ಲಾಕ್ ಆದ್ರು

ಬೆಂಗಳೂರು : ಪೊಲೀಸರು ಎಂದು ಹೇಳಿ ಮನೆಗೆ ಬಂದ ಖದೀಮರು ಹಣ ಒಡವೆ ತೆಗೆದುಕೊಂಡು ಎಸ್ಕೇಪ್​ ಆದ ಘಟನೆ ಭೋವಿಪಾಳ್ಯದಲ್ಲಿ ನಡೆದಿದೆ.

ಕಳೆದ ಡಿಸೆಂಬರ್ 31 ರಂದು ಸಮಯನಾಯ್ಕ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದು,ತಿಪಟೂರು ಪೊಲೀಸರು ಎಂದು ಹೇಳಿ ಮನೆ ಸರ್ಚ್ ಮಾಡ್ಬೇಕು ಎಂದಿದ್ದರು. ಕಳ್ಳ ಎಂದು ಓರ್ವನನ್ನು ಕರೆದುಕೊಂಡು ಬಂದಿದ್ದರು. ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ವಾರ್ನ್ ಮಾಡಿದ್ದರು ಫೋನ್​ಗಳನ್ನ ಕಿತ್ತುಕೊಂಡು 2 ಗಂಟೆ ಮನೆ ಸರ್ಚ್ ಮಾಡಿದ್ದ ಗ್ಯಾಂಗ್ ಮನೆಯಲ್ಲಿದ್ದ 19 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದಾರೆ. ಠಾಣೆಗೆ ತೆರಳಿದಾಗ ನಕಲಿ ಪೊಲೀಸರು ರಾಬರಿ ಮಾಡಿರೋದು ಬೆಳಕಿಗೆ ಬಂದಿದ್ದು.ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿಶೀಟರ್ಸ್ ಸೇರಿ ಐವರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Exit mobile version