Site icon PowerTV

6 ಸಿಂಹಗಳೊಂದಿಗೆ ಮಹಿಳೆಯ ಗತ್ತಿನ ನಡುಗೆ

ಮಹಿಳೆಯೊಬ್ಬಳು ಕಾಡೊಂದರಲ್ಲಿ ಆರು ಸಿಂಹಗಳೊಂದಿಗೆ ಓಡಾಡುತ್ತಿರುವ ದೃಶ್ಯವೊಂದು ವೈರಲ್‌ ಆಗಿದ್ದು, ಸಿಂಹಗಳ ಜೊತೆ ಓಡಾಡುತ್ತಿರುವ ಮಹಿಳೆಯ ಧೈರ್ಯ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಆಕೆ ಜನ ಸಾಕುನಾಯಿಗಳ ಜೊತೆ ಆರಾಮವಾಗಿ ವಾಕ್‌ ಹೋಗುವಂತೆ ಸಿಂಹಗಳ ಹಿಂದೆ ಹೋಗುತ್ತಿರುವುದು ಕಾಣಿಸುತ್ತಿದೆ.

ವಿಡಿಯೋದ ಕೊನೆ ಫ್ರೇಮ್‌ನಲ್ಲಿ ಆಕೆ ಕೊನೆಯಲ್ಲಿದ್ದ ಒಂದು ಸಿಂಹದ ಬಾಲವನ್ನು ಹಿಡಿದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಜೊತೆಗೆ ಆಕೆ ಕ್ಯಾಮರಾದತ್ತ ಕೈ ಬೀಸುತ್ತಿದ್ದಾಳೆ. ಇನ್ನು ಕುತೂಹಲಕಾರಿ ವಿಚಾರವೆಂದರೆ ಇವರ ಜೊತೆಗಿದ್ದ ಮಹಿಳೆಯ ಮೇಲಾಗಲಿ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲಾಗಲಿ ಈ ಸಿಂಹಗಳು ದಾಳಿ ನಡೆಸಿಲ್ಲ.

ವಿಡಿಯೋದಲ್ಲಿರುವ ಮಹಿಳೆ ಬಹಳ ಖುಷಿಯಾಗಿ ಸಿಂಹಗಳ ಹಿಂದೆ ಬರುತ್ತಿರುವುದು ಕಾಣಿಸುತ್ತಿದೆ.  ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊ ವೈರಲ್ ಆಗಿದೆ. ಇದನ್ನು 1.39 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಮತ್ತು 9,000 ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

Exit mobile version