Site icon PowerTV

ಕೊರೋನಾ ಸುಳ್ಳು ಇದು ಮೆಡಿಕಲ್ ಮಾಫಿಯಾ : ಅಗ್ನಿ ಶ್ರೀಧರ್

ಬೆಂಗಳೂರು : ಕೆಲವರು ಕೊರೋನಾ ಬಗ್ಗೆ ಆರಂಭದಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಲೇಖಕ, ಚಿತ್ರ ನಿರ್ದೇಶಕ ಅಗ್ನಿ ಶ್ರೀಧರ್ ಕೊರೋನಾ ಬಗ್ಗೆ ಅಸಡ್ಡೆಯಾಗಿ ಮಾತನಾಡಿದ್ದಾರೆ.

ಕ್ರೀಮ್​​ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ವೈದ್ಯಕೀಯ ವಿಭಾಗದವರು ಹಣ ಮಾಡಿಕೊಳ್ಳಲು ಕೊರೋನಾ ಭೀತಿ ಹಬ್ಬಿಸಿದ್ದಾರೆ. ನಾನು ಈವರೆಗೆ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನನ್ನ ಕುಟುಂಬವರೂ ಸಹ ವ್ಯಾಕ್ಸಿನ್ ತೆಗೆದುಕೊಂಡಿಲ್ಲ.

ಕೊರೋನಾ, ಲಾಕ್‌ಡೌನ್ ಇನ್ನಿತರೆ ಮಾರ್ಗಗಳಿಂದ ರಾಜಕಾರಣಿಗಳು ತಳವರ್ಗದವರನ್ನು ಬದುಕಿರುವಾಗಲೇ ಕೊಂದಿದ್ದಾರೆ. ಇತ್ತೀಚೆಗೆ ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾಗಲೂ ಇದೇ ಮಾತುಗಳನ್ನು ಹೇಳಿದ್ದೆ. ಶೇಖಡಾ 60 ವೈದ್ಯರು ಈವರೆಗೆ ಕೊರೋನಾ ಲಸಿಕೆ ಪಡೆದಿಲ್ಲ, ಇದು ಸತ್ಯ. ಯಾರೂ ಕೊವಿಡ್​ನಿಂದ ಸತ್ತಿಲ್ಲ ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.

Exit mobile version