Site icon PowerTV

ಕೋವಿಡ್ ರೂಲ್ಸ್​ ಮುಂದುವರಿಕೆ : ಸಚಿವ ಕೆ. ಸುಧಾಕರ್

ರಾಜ್ಯ : ಕೋವಿಡ್ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.

ಹಲವೆಡೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಲಕ್ಷಣ ಇಲ್ಲವೆಂದು ಯಾರೂ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್‌ ಡೋಸ್ ಪಡೆಯಲು ಅರ್ಹರಿರುವವರು ಪಡೆಯಿರಿ. 2ನೇ ಡೋಸ್ ಲಸಿಕೆ ಪಡೆಯದವರೂ ಆದಷ್ಟು ಬೇಗ ಪಡೆಯಿರಿ. ಕ್ರಮಗಳನ್ನು ಜನರೇ ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಸಲಹೆ ನೀಡಿದ್ದಾರೆ.

ಲಾಕ್​ಡೌನ್ ಕುರಿತು ಮಾತನಾಡಿರುವ ಸುಧಾಕರ್, ‘‘ಲಾಕ್‌ಡೌನ್ ಮೂಲಕ ಕೊರೋನಾ ನಿಯಂತ್ರಿಸುವುದು ಸರಿಯಲ್ಲ. ಸಿಎಂಗಳ ಜತೆಗಿನ ಸಭೆಯಲ್ಲಿ ಪ್ರಧಾನಿಯೂ ಇದನ್ನೇ ಹೇಳಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅನಗತ್ಯವಾಗಿ ಜನಜಂಗುಳಿ ಸೇರುವುದು, ಸಮಾರಂಭ ಮಾಡಬೇಡಿ’’ ಎಂದಿದ್ದಾರೆ.

Exit mobile version