Site icon PowerTV

ಬೆಳಗಾವಿ ಡಿಸಿ ಕಚೇರಿ ಎದುರು ಕಲಾವಿದರ ಪ್ರತಿಭಟನೆ

ಬೆಳಗಾವಿ: ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ ಟಫ್ ರೂಲ್ಸ್ ಜಾರಿ ವಿಚಾರವಾಗಿ ನೊಂದ ಕಲಾವಿದರ ಕುಟುಂಬಕ್ಕೆ ಪರಿಹಾರ ಧನ ನೀಡುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿ ಡಿಸಿ ಕಚೇರಿ ಎದುರು ವಿವಿಧ ಕಲಾವಿದರ ಪ್ರತಿಭಟನೆ ನಡೆದಿದ್ದು, ಹಾಸ್ಯ ಕಲಾವಿದ ಸಂಜು ಬಸಯ್ಯ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದ್ದು, ಕಲಾವಿದರ ಕಾರ್ಯಕ್ರಮಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌, ಈಗ ಟಫ್ ರೂಲ್ಸ್‌ನಿಂದ ಕಲಾವಿದರು ಕಂಗೆಟ್ಟಿದ್ದಾರೆ.

ವೃತ್ತಿ ರಂಗಭೂಮಿ, ರಸಮಂಜರಿ, ಹವ್ಯಾಸಿ ಹಾಗೂ ಧ್ವನಿವರ್ಧಕ ಸಂಘಗಳ ಮಾಲೀಕರು ಕಷ್ಟದಲ್ಲಿದ್ದೇವೆ,ಹೀಗಾಗಿ ವೃತ್ತಿಪರ ರಂಗದ ಪ್ರತಿ ಕಲಾವಿದರಿಗೆ ಕನಿಷ್ಟ 5 ಸಾವಿರ ಪರಿಹಾರ ನೀಡುವಂತೆ ಬೆಳಗಾವಿ ಡಿಸಿ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Exit mobile version