Site icon PowerTV

ಕೋವಿಡ್​​ ಹೆಚ್ಚಳ : ನೀರಸಾಗರ ಜಲಾಶಯಕ್ಕೆ ನಿಷೇಧ

ಧಾರವಾಡ : ದಿನೇದಿನೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಧಾರವಾಡ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ಧಾರವಾಡ ಜಿಲ್ಲೆಯ ನೀರಸಾಗರ ಜಲಾಶಯ ಪ್ರವೇಶಕ್ಕೆ ನಿಷೇಧ ಹೇರಿದ್ದು ಪ್ರವೇಶಿಗರಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಕೋವಿಡ್ 19 ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಂಡಿದ್ದು ನಾಳೆಯಿಂದ, ಒಟ್ಟು ಮೂರು‌ ದಿನಗಳವರೆಗೆ ನೀರಸಾಗರ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಜಾತ್ರೆ ಹಾಗೂ ಜನಸಂದಣಿ ಸೇರುವುದನ್ನು ತಡೆಯಲು ನಿಷೇಧ ಹೇರಲಾಗಿದೆ.ಜೊತೆಗೆ ಸಂಕ್ರಾಂತಿ ಹಾಗೂ ವೀಕೆಂಡ್​ ಹಿನ್ನಲೆ ಜಲಾಶಯದ ಬಳಿ ಸಾವಿರಾರು ಸಂಖ್ಯೆ ಜನ ಜಮಾವಣೆ ಆಗ್ತಾ ಇದ್ದ ಕಾರಣ ಜಲಾಶಯಕ್ಕೆ ಸಾರ್ವಜನಿಕ ನಿಷೇಧ ಹೇರಿದ ಜಿಲ್ಲಾಡಳಿತ.

Exit mobile version