Site icon PowerTV

ಗಂಡಸ್ತನ ಇದ್ರೆ ಮಾಡಿ ತೋರಿಸಿ : ಮಾಜಿ‌ ಸಚಿವ ಚೆಲುವರಾಯಸ್ವಾಮಿ

ರಾಮನಗರ : ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ ಜೆಡಿಎಸ್​​ಗೆ ಮೇಕೆದಾಟು ಯೋಜನೆ ಬೇಕಾಗಿಲ್ಲ. ಹೀಗಾಗಿ ಪಾದಯಾತ್ರೆಯನ್ನ ವಿರೋಧಿಸುತ್ತಿದ್ದಾರೆ ಎಂದು ಮಾಜಿ‌ ಸಚಿವ, ಕಾಂಗ್ರೆಸ್​ ಮುಖಂಡ ಎನ್​. ಚೆಲುವರಾಯಸ್ವಾಮಿ ಅವರು ಟೀಕಿಸಿದ್ದಾರೆ.

ಇಂದು ರಾಮನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಧಾನಿ ಕೈಯಲ್ಲಿಬೇಕಾದ್ರೆ ಹೇಳಿಸಲಿ ನಾವು ಈ ಯೋಜನೆ ಜಾರಿಗೆ ತಂದೇ ತರ್ತೀವಿ ಅಂತ. ಕಾಂಗ್ರೆಸ್ ತೀರ್ಮಾನ ತೆಗೆದುಕೊಂಡಿರೋದು ಜನರಿಗೆ ಒಲವಿದೆ. ಮಂತ್ರಿಗಳಾಗಿ ಇದ್ದವರು ಇಂತಹದ್ದಕ್ಕೆ ಸಹಮತ ವ್ಯಕ್ತಪಡಿಸಬೇಕು. ಆದರೆ, ಸುಳ್ಳು ಮಾಹಿತಿ‌ ಕೊಡಲು ಹೊರಟಿದ್ದಾರೆ ಎಂದರು.

ಅಲ್ಲದೇ, ಡಿಪಿಆರ್ ಮಾಡಿ ಎಲ್ಲವೂ ಮಾಡಿದ್ದು ನಾವು. ಅವತ್ತಿನಿಂದ ಇಲ್ಲಿಯತನಕ ಒಂದು ಹೆಜ್ಜೆ ಮುಂದೆ ಬಂದಿಲ್ಲ. ಯಾವುದಕ್ಕೂ‌ ನಾವೂ ಹೆದರಲ್ಲ. ಒಂದು ವಾರದಿಂದ ಏನೆಲ್ಲಾ ಸಂಚು ಮಾಡುತ್ತಿದ್ದಾರೆ ಎಂಬುದನ್ನ ನೋಡುತ್ತಿದ್ದೇನೆ. ಗಂಡಸ್ತನ ಇದ್ದರೆ ಯೋಜನೆ ಮಾಡಿ ತೋರಿಸಲಿ ಎಂದು ಬಿಜೆಪಿ, ಜೆಡಿಎಸ್​ ವಿರುದ್ಧ ಎನ್​ ಚಲುವರಾಯಸ್ವಾಮಿ ಅವರು ಸವಾಲ್​ ಹಾಕಿದ್ದಾರೆ.

Exit mobile version