Site icon PowerTV

ಹುಚ್ಚ ವೆಂಕಟ್​ ಅಲ್ಲ ತಿಕ್ಲಾ ಹುಚ್ಚ ವೆಂಕಟ್

ಬೆಂಗಳೂರು: ಎಲ್ಲೆಲ್ಲೋ ಹೋಗಿ, ಜನರಿಂದ ಏಟು ತಿಂದು, ಪೊಲೀಸರ ಅತಿಥಿಯಾಗಿ ಏನೇನೋ ರಂಪ ಮಾಡಿಕೊಂಡಿದ್ದ ಹುಚ್ಚ ವೆಂಕಟ್ ಇದ್ದಕ್ಕಿದ್ದಂತೆ ಮಾಧ್ಯಮಗಳಿಂದ ಮರೆಯಾಗಿದ್ದರು. ಈಗ ಅಚಾನಕ್ಕಾಗಿ ಪ್ರತ್ಯಕ್ಷವಾಗಿದ್ದಾರೆ.

ಪ್ರೆಸ್​ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹುಚ್ಚ ವೆಂಕಟ್, ತಮ್ಮ ತಂದೆಯವರು ಕಾಲವಾದ ವಿಚಾರವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು. ನಾನು ಬದಲಾಗಿದ್ದೇನೆ. ತಂದೆಯವರ ಆಸೆಯಂತೆ ಸಿನಿಮಾಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ತಮ್ಮ ಹೊಸ ಸಿನಿಮಾದ ಹೆಸರು ‘ತಿಕ್ಲ ಹುಚ್ಚ ವೆಂಕಟ್’ ಆಗಿರಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿ ಮುಗಿಯುವವರೆಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಹುಚ್ಚ ವೆಂಕಟ್ ವರ್ತನೆಯಲ್ಲಿ ತುಸು ಬದಲಾವಣೆಯೂ ಕಾಣಿಸಿತು. 2020ರ ಆರಂಭದಲ್ಲಿ ಮಾನಸಿಕ ಅಸ್ವಸ್ಥರಂತೆ ಹುಚ್ಚ ವೆಂಕಟ್ ವರ್ತಿಸಿದ್ದರು. ಶ್ರೀರಂಗಪಟ್ಟಣ, ಮಡಿಕೇರಿ ಇನ್ನಿತರ ಕಡೆಗಳಲ್ಲಿ ಹಾದಿ-ಬೀದಿ ರಂಪ ಮಾಡಿ ಸಾರ್ವಜನಿಕರಿಂದ ಒದೆ ತಿಂದಿದ್ದರು. 2020 ರ ನವೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದ ಹುಚ್ಚ ವೆಂಕಟ್ ಆನಂತರ ಕಣ್ಮರೆಯಾಗಿದ್ದರು. ಈಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ.

Exit mobile version