Site icon PowerTV

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪನ

ರಾಜ್ಯ : ಚಿಕ್ಕಬಳ್ಳಾಪುರ ಜಿಲ್ಲೆಯನ್ನ ಬಿಟ್ಟು ಬಿಡದಂತೆ ಭೂಕಂಪನ ಕಾಡ್ತಿದೆ. ಪದೇ ಪದೇ ಭೂಮಿಯ ಕಂಪನಕ್ಕೆ ಸ್ಥಳೀಯ ಜನ ಬೆಚ್ಚಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಎಲ್ಲೋಡು ಪಂಚಾಯತಿಯ ಬುಲ್ಲಸಂದ್ರ,ಕಂಬಾಲಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ. ಭೂಮಿಯ ಕಂಪನಕ್ಕೆ ಬೆಚ್ಚಿಬಿದ್ದು ಮನೆಯಿಂದ ಹೊರಗೆ ಜನ ಓಡಿ ಬಂದಿದ್ದಾರೆ. ಭೂಕಂಪನಕ್ಕೆ ಕೆಲ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಜನ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಇನ್ನು ಗಣಿಗಾರಿಕೆಯಿಂದ ಭೂಕಂಪನ ಸಂಭವಿಸುತ್ತಿರುವ ಶಂಕೆ ಕೂಡ ವ್ಯಕ್ತವಾಗಿದೆ. ಸ್ಥಳಕ್ಕೆ‌ ಗುಡಿಬಂಡೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version