Site icon PowerTV

ಅಂಜನಾದ್ರಿ ಮೇಲೆ ಕೊರೋನಾ ಕರಿನೆರಳು

ಕೊಪ್ಪಳ : ಜಿಲ್ಲೆಯಲ್ಲಿ ಕೊರೋನಾ ಕೇಸ್ ಹೆಚ್ಚಳದ ಹಿನ್ನೆಲೆ, ಜಾತ್ರೆ ಹಾಗೂ ದೇವಸ್ಥಾನ ಪ್ರವೇಶವನ್ನು ರದ್ದು ಮಾಡಲು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಆದೇಶ ಮಾಡಿದ್ದಾರೆ.

ಈ ಮೂಲಕ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಮೂರು ದಿನಗಳ ಕಾಲ ಭಕ್ತರ ಆಗಮನವನ್ನ ನಿಷೇಧ ಮಾಡಲಾಗಿದೆ. ಸಂಕ್ರಾಂತಿ ಹಿನ್ನೆಲೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾವಿರಾರು ಭಕ್ತರು ಬರೋ ಸಾಧ್ಯತೆ ಹೆಚ್ಚಿದೆ ಅದ್ದರಿಂದ ಬೆಟ್ಟಕ್ಕೆ ನಿಷೇಧ ಹೇರಲಾಗಿದ್ದು, ಮುಂಜಾಗೃತ ಕ್ರಮವಾಗಿ ದೇವಸ್ಥಾನವನ್ನ ಮುಚ್ಚಲಾಗುತ್ತದೆ. ಜೊತೆಗೆ ಇದೇ 15 ರಂದು ನಡೆಯಬೇಕಿದ್ದ ಗಂಗಾವತಿಯ ಚನ್ನಬಸವ ತಾತನವರ ಜಾತ್ರೆ ಹಾಗೂ 17 ರಂದು ನಡೆಯಬೇಕಿದ್ದ ದುರ್ಗಮ್ಮ ದೇವಿ ಜಾತ್ರೆಗಳ ಮೇಲೂ ಈಗಾಗಲೆ ನಿರ್ಬಂಧ ‌ಹೇರಲಾಗಿದೆ.

Exit mobile version