Site icon PowerTV

ಸಿಕ್ಕಿಬಿದ್ದ ಖತರ್ನಾಕ್​​ ಕಳ್ಳಿಯರು

ಕೋಲಾರ : ವೇಸ್ಟ್ ಪೇಪರ್ ಆಯಲು ಬಂದು ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಕೋಲಾರ ತಾಲೂಕಿನ ಹೊಳೂರು ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಇಬ್ಬರು ಮಹಿಳೆಯರನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮದ ಮಮತಾ ಅನ್ನೋರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಮನೆಯಲ್ಲಿನ ಕಬ್ಬಿಣದ ಬೀರುವನ್ನು ಒಡೆದು ಕಳವು ಮಾಡುತ್ತಿದ್ದಾಗ, ಪಕ್ಕದ ಮನೆಯವ್ರು ಮಮತಾಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮನೆಗೆ ಆಗಮಿಸಿದಾಗ ಮಮತಾ ಅವ್ರ ಕೈಗೆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಇಬ್ಬರು ಕಳ್ಳಿಯರು ತಮಿಳುನಾಡು ಮೂಲದವ್ರು ಎನ್ನಲಾಗಿದೆ. ಕಳ್ಳಿಯರನ್ನ ಥಳಿಸಿದ ಗ್ರಾಮಸ್ಥರು ತದನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

Exit mobile version