Site icon PowerTV

49ನೇ ಹುಟ್ಟುಹಬ್ಬ ಆಚರಿಸಿಕೊಂಡ ಟೀಂ ಇಂಡಿಯಾ ಕೋಚ್ : ರಾಹುಲ್​ ದ್ರಾವಿಡ್​​

ದೇಶ : ವಯಸ್ಸಾಗುತ್ತಿದ್ದಂತೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದವರಿಗೆ ಏನು ಉತ್ತರಿಸಬೇಕೆಂಬುದು ತಿಳಿಯುತ್ತಿಲ್ಲ. ಆದರೆ ಶುಭ ಕೋರಿಕೆಗಳು ತುಂಬಾ ಖುಷಿ ಕೋಡುತ್ತಿದೆ ಎಂದು 49ನೇ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡಿಗ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಆರಂಭದೊಂದಿಗೆ ಕೋಚ್ ದ್ರಾವಿಡ್ 49ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದ್ರಾವಿಡ್, ಹುಟ್ಟುಹಬ್ಬಕ್ಕೆ ಶುಭಕೋರಿದವರಿಗೆ ಏನು ಮರು ಉತ್ತರಿಸಬೇಕೆಂದು ಗೊತ್ತಾಗುತ್ತಿಲ್ಲ ಎಂದಿದ್ದು ಆದರೆ ಶುಭಾಶಯಗಳನ್ನು ಗಮನಿಸಿದಾಗ ತುಂಬಾ ಸಂತೋಷವಾಗುತ್ತಿದೆ. ಸ್ನೇಹಿತರು, ಕುಟುಂಬದವರು, ಅಭಿಮಾನಿಗಳು ಶುಭಕೋರಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸುತ್ತಿದ್ದೇನೆ ಎಂದರು.

Exit mobile version