Site icon PowerTV

ಕೇಂದ್ರ ಸಚಿವಾಲಯದ ಟ್ವಿಟ್ಟರ್​​ ಖಾತೆ ಹ್ಯಾಕ್​​

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್‌ ಖಾತೆ ಹ್ಯಾಕ್‌ ಆಗಿದೆ. ಸಚಿವಾಲಯದ ಟ್ವಿಟರ್‌ ಖಾತೆಯನ್ನು ಎಲೋನ್‌ ಮಸ್ಕ್‌ ಎಂದು ಹ್ಯಾಕರ್‌ಗಳು ಬದಲಾಯಿಸಿದ್ದಾರೆ.

ಟ್ವಿಟ್ಟರ್ ಖಾತೆ ಹ್ಯಾಕ್‌ ಮಾಡಿ, ʻಉತ್ತಮ ಕೆಲಸ. ಹೊಸ ವರ್ಷದ ಕಾರ್ಯಕ್ರಮʼ ಎಂದು ಟ್ವೀಟ್‌ ಮಾಡಲಾಗಿದೆ. ಅಲ್ಲದೇ ಕ್ಯಾಲಿಫೋರ್ನಿಯಾದಲ್ಲಿ ಸೌರ ತೆರಿಗೆ ಕ್ರಮವನ್ನು ಟೀಕಿಸಿದ ಎಲೋನ್‌ ಮಸ್ಕ್‌ ಅವರ ಹ್ಯಾಂಡಲ್‌ ಪೋಸ್ಟ್‌ ಅನ್ನು ಮರು ಟ್ವೀಟ್‌ ಮಾಡಲಾಗಿದೆ.

ಇದಾದ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟ್ಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದ್ದು, ಪೋಸ್ಟ್‌ಗಳನ್ನು ತೆಗೆದುಹಾಕಿದೆ. ಆದರೆ ಹ್ಯಾಕ್‌ ಆಗಿರುವ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ತಕ್ಷಣ ಎಚ್ಚೆತ್ತ ಸಚಿವಾಲಯ ತನ್ನ ಟ್ವೀಟರ್‌ ಖಾತೆಯನ್ನು ಮರುಸ್ಥಾಪಿಸಿದೆ. ಅಲ್ಲದೆ ಹ್ಯಾಕರ್ಸ್‌ ಮಾಡಿದ ಟ್ವೀಟ್‌ಗಳನ್ನು ಡೀಲಿಟ್‌ ಮಾಡಿ ಖಾತೆಯನ್ನು ಭದ್ರಪಡಿಸಿದೆ. “@Mib_india ಖಾತೆಯನ್ನು ಮರುಸ್ಥಾಪಿಸಲಾಗಿದೆ. ಇದು ಎಲ್ಲಾ ಅನುಯಾಯಿಗಳ (Followers) ಮಾಹಿತಿಗಾಗಿ,” ಎಂದು ಸಚಿವಾಲಯವು ಖಾತೆಯನ್ನು ಮರುಸ್ಥಾಪಿಸಿದ ನಂತರ ಟ್ವೀಟ್ ಮಾಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯ ಟ್ವಿಟರ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ

Exit mobile version