Site icon PowerTV

ಪಾದಯಾತ್ರೆ ತಡೆಯುವ ಬಗ್ಗೆ ಸರ್ಕಾರ ಪ್ಲಾನ್

ರಾಮನಗರ : ಪಾದಯಾತ್ರೆ ತಡೆಯುವ ಬಗ್ಗೆ ಸರ್ಕಾರ ಪ್ಲಾನ್ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನೋಡೋಣ ಅವರು ಏನು ಕ್ರಮ ಕೈಗೊಳ್ಳುತ್ತಾರೆ,ಅವರು ಏನು ಮಾಡಿದರು ಅದನ್ನು ಎದುರಿಸಲು ನಾವೆಲ್ಲ ಎಲ್ಲ ರೀತಿಯಿಂದಲೂ ರೆಡಿ ಇದ್ದೇವೆ ಎಂದು ಹೇಳಿದರು.

ಸರ್ಕಾರ ಅವರದ್ದು ಇದೆ, ಅವರು ಏನಾದರೂ ಕ್ರಮ ತಗೊಂಡರೆ ನಾವು ಅದನ್ನು ಲೀಗಲ್ ಆಗಿ ಎದುರಿಸುತ್ತೇವೆ,ನಮ್ಮದು ಇಚ್ಚಾಶಕ್ತಿ ಪಾದಯಾತ್ರೆ ಮಾಡಿ, ಯೋಜನೆ ಜಾರಿಯಾಗಬೇಕು ಎಂದರು. ನಾವು ತಪ್ಪು ಮಾಡದೆ ಇದ್ದರು ಎಫ್ಐಆರ್ ಹಾಕಿದರೆ ,ಹಾಕಲಿ ಇನ್ನೂ ಎಷ್ಟು ಬೇಕಿದ್ದರೂ ಹಾಕಲಿ ನಾವಂತೂ ಹೆದರುವುದಿಲ್ಲ ಕಾನೂನಾತ್ಮಕವಾಗಿಯೇ ಎದುರಿಸಲು ಸಿದ್ದರಿದ್ದೇವೆ. ಸರ್ಕಾರದ ಎಫ್ಐಆರ್ ತಂತ್ರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಗೃಹ ಸಚಿವರು ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದರು ಆದರೆ ಅವರು ಪಾದಯಾತ್ರೆ ಕೈ ಬಿಡಿ ಎಂದು ಹೇಳಿಲ್ಲ,ಮೂರು ದಿನವೂ ಕೂಡ ಪಾದಯಾತ್ರೆ ಯಶಸ್ವಿಯಾಗಿದೆ.೧೯ನೇ ತಾರೀಖಿನವರೆಗೂ ಯಶಸ್ವಿಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

Exit mobile version