Site icon PowerTV

ಕೊರೋನಾದಿಂದ ಸಂಕ್ರಾಂತಿ ಹಬ್ಬಕ್ಕೂ ಬ್ರೇಕ್ !

ಮಂಡ್ಯ : ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬ ಹಾಗೂ ವೈಕುಂಠ ಏಕಾದಶಿಗೆ ಬ್ರೇಕ್ ಬಿದ್ದಿದೆ.

ಜ.13 ವೈಕುಂಠ ಏಕಾದಶಿ ಹಾಗೂ ಜ.15 ಸಂಕ್ರಾತಿ ಹಬ್ಬ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡುವಂತಿಲ್ಲ,ಮನೆ ಮನೆಗಳಿಗೆ ತೆರಳಿ ಹಬ್ಬದ ಸಂಭ್ರಮಾಚರಣೆ ಮಾಡುವಂತಿಲ್ಲ,ಈ ಬಾರಿ ಸಂಕ್ರಾತಿ ಹಬ್ಬ ಕುಟುಂಬಕ್ಕೆ ಮಾತ್ರ ಸೀಮಿತ ಎಂದು ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಆದೇಶವನ್ನು ಹೊರಡಿಸಲಾಗಿದೆ.

ವಾರಾಂತ್ಯವಾದ್ದರಿಂದ ಸಂಕ್ರಾಂತಿ ಹಬ್ಬದ ದಿವಸ ಕಿಚ್ಚಾಯಿಸುವಂತಿಲ್ಲ,ಒಂದುವೇಳೆ ಆದೇಶ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಸಿಸಲಾಗುವುದು,ಮನೆಯಲ್ಲೆ ಹಬ್ಬ ಆಚರಣೆಗೆ ಮಾತ್ರ ಅವಕಾಶ,ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

Exit mobile version