Site icon PowerTV

ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಬ್ಲಾಸ್ಟ್

ಕೊಪ್ಪಳ : ಕೊಪ್ಪಳ ತಾಲೂಕಿನ ಟಣಕನ ಕಲ್ ಗ್ರಾಮದಲ್ಲಿ ಗಂಗಾ ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಬ್ಲಾಸ್ಟ್ ಸಂಭವಿಸಿದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ಬ್ಲಾಸ್ಟ್​​ನಿಂದ ಕೆಲ ರೈತರು ಗಾಯಗೊಂಡಿದ್ದಾರೆ. ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಕಲ್ಲು ಬ್ಲಾಸ್ಟ್ ಮಾಡುವುದನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲು ರೈತರು ಮುಂದಾಗಿದ್ದು ಈ ವೇಳೆ ಕಲ್ಲಿನ ಚೂರುಗಳು ರೈತರಿಗೆ ತಗುಲಿವೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೂ ಕಲ್ಲುಗಳು ತಗುಲಿವೆ. ಸದ್ಯ ಬ್ಲಾಸ್ಟ್ ವಿರೋಧಿಸಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ವಿರೋಧದ ನಡುವೆಯೂ ಬ್ಲಾಸ್ಟ್ ಮಾಡಿದ್ದು ರೈತರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ. ಬಿಜೆಪಿ ಮುಖಂಡ ಡಿ.ಮಲ್ಲಣ್ಣ ಎನ್ನುವವರಿಗೆ ಸೇರಿದ ಸ್ಟೋನ್ ಕ್ರಷರ್ ಇದಾಗಿದೆ.

Exit mobile version