Site icon PowerTV

ದೀದಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ 1,250 ಕೋಟಿ ರೂಪಾಯಿ ಕ್ರೀಡಾ ಹಗರಣವೊಂದು ಬೆಳಕಿಗೆ ಬಂದಿದೆ.

ಕ್ರೀಡೆಯ ಹೆಸರಲ್ಲಿ ಸರ್ಕಾರದಿಂದ ಹಣ ಮಂಜೂರು ಮಾಡಿ ರಾಜಕೀಯ ರ‌್ಯಾಲಿ,  ರಾಜಕೀಯ ಕಾರ್ಯಕ್ರಮ, ಚುನಾವಣೆಗೆ ಬಳಸಿಕೊಂಡ ಆರೋಪ ಇದೀಗ ಟಿಎಂಸಿ ಸರ್ಕಾರದ ಮೇಲೆರಗಿದೆ. ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರೆ ಭಾರತಿ ಘೋಷ್ ಬಹಿರಂಗಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಯುವ ಕ್ರೀಡಾಪಟುಗಳಿಗೆ ನೆರವಾಗಲು ಪಶ್ಚಿಮ ಬಂಗಾಳ ಸರ್ಕಾರ 2014ರಲ್ಲಿ ಸ್ಪೋರ್ಟ್ಸ್ ಕ್ಲಬ್‌ಗಳಿಗೆ ಸಹಾಯ ಧನ ಆರಂಭಿಸಿದ್ದಾರೆ. ಆದರೆ ಈ ಹಣವನ್ನು ಟಿಎಂಸಿ ತನ್ನ ರಾಜಕೀಯ ಉದ್ದೇಶಕ್ಕೆ ಬಳಸಿದೆ ಎಂದು ಭಾರತೀ ಘೋಷ್ ಆರೋಪಿಸಿದ್ದಾರೆ.

Exit mobile version