Site icon PowerTV

ಮೇಕೆದಾಟು ಪಾದಯಾತ್ರೆಗೆ ಹಾಸನದಿಂದ 6000 ಜನ

ಮೇಕೆದಾಟು ಪಾದಯಾತ್ರೆಗೆ ಹಾಸನ ಜಿಲ್ಲೆಯಿಂದ ಸುಮಾರು 6 ಸಾವಿರ ಜನ ಹೊರಟಿದ್ದು, ಕಾಂಗ್ರೆಸ್ ಮುಖಂಡರಿಂದ ಕೊರೋನಾ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿದಂತಾಗಿದೆ.

ಮಾಜಿ ಎಂಎಲ್‍ಸಿ ಗೋಪಾಲಸ್ವಾಮಿ, ಮಾಜಿ ಶಾಸಕ ಪುಟ್ಟೇಗೌಡ, ಬಾಗೂರು ಮಂಜೇಗೌಡ, ಕೃಷ್ಣೇಗೌಡ ನೇತೃತ್ವದಲ್ಲಿ ಸುಮಾರು 300 ವಾಹನದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಹೊರಟಿದ್ದಾರೆ. ಜಿಲ್ಲೆಯ ಗಡಿಭಾಗ ಹಿರೀಸಾವೆ ಬಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.

Exit mobile version