Site icon PowerTV

49ರ ಸಂಭ್ರಮದಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್

ಭಾರತ : ಟೀಮ್​​​ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ರಾಹುಲ್ ದ್ರಾವಿಡ್ ಟೀಮ್​​ ಇಂಡಿಯಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್ ಕ್ರಿಕೆಟ್ ಸೇವೆ ನಿರಂತರವಾಗಿ ಸಾಗಿದೆ. 2012ರಲ್ಲಿ ದ್ರಾವಿಡ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ ದ್ರಾವಿಡ್ ಕ್ರಿಕೆಟ್ ಸೇವೆ ಮುಂದುವರಿದಿದೆ. ಐಪಿಎಲ್ ಹಾಗೂ ಟೀಂ ಇಂಡಿಯಾದಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದ ದ್ರಾವಿಡ್ ಇದೀಗ ಟೀಂ ಇಂಡಿಯಾ ಕ್ರಿಕೆಟ್‌ನ ಅತ್ಯುನ್ನತ ಜವಾಬ್ದಾರಿಯಾಗಿರುವ ಕೋಚ್ ಸ್ಥಾನ ಅಲಂಕರಿಸಿದ್ದಾರೆ.

Exit mobile version