Site icon PowerTV

ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

ರಾಮನಗರ : ನಿನ್ನೆ ನಾನು ಪಾದಯಾತ್ರೆ ಯಲ್ಲಿ ಭಾಗವಹಿಸಲು ಸಾಧ್ಯವಗಿರಲಿಲ್ಲ,ಮೊನ್ನೆ ಜ್ವರ ಕಾಣಿಸಿತ್ತು, ಬೆಂಗಳೂರಿಗೆ ಹೊಗಿದ್ದೆ,ವೈದ್ಯರಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆದು ಬಂದಿದ್ದೇನೆ,ಇವತ್ತಿನ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ.ಎರಡು ದಿನ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಈ ಪಾದಯಾತ್ರೆಯಲ್ಲಿ ಡಿಕೆಶಿ ನೇತೃತ್ವದಲ್ಲಿ ಎಲ್ಲರೂ ಭಾಗವಹಿಸಿದ್ದರು. ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಿದ್ದರು, ಆದರೆ ಇವತ್ತು ಮೈಸೂರು ಜಿಲ್ಲೆಯ ಕಾರ್ಯಕರ್ತರು ಬಂದಿದ್ದಾರೆ. ಇದೆ ರೀತಿಯಲ್ಲಿ ಬೇರೆ ಜಿಲ್ಲೆಗಳಿಂದ ಕಾರ್ಯಕರ್ತರು ಬಂದು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದಾರೆ ಎಂದರು.

ಮೇಕೆದಾಟು ಯೋಜನೆ ಅಗಬೇಕು ಎಂಬ ಬಯಕೆ ಇದೆ,ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಅನುಕೂಲ ಆಗುತ್ತದೆ, ನಾವು ಪ್ರಾರಂಭ ಮಾಡಿದಂತ ಯೋಜನೆ ಇದು ಮತ್ತೆ ಯಾಕೆ ಪ್ರಸ್ತಾಪ ಮಾಡುತ್ತಾ ಇದ್ದೇನೆ ಅಂದರೆ ಸಚಿವ ಕಾರಜೋಳ ಪ್ರತಿದಿನ ಅಗತ್ಯವಾಗಿ‌ಮಾತನಾಡುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರ ವಿಳಂಬ ‌ಮಾಡಿತು ಅಂತಿದ್ದಾರೆ ತಮ್ಮ ತಪ್ಪು ಮುಚ್ಚುಕೊಳ್ಳುವ ಕೆಲಸ ಮಾಡುತ್ತಾ ಇದ್ದಾರೆ, ಐದು ವರ್ಷ ಬಿಜೆಪಿ ಸರ್ಕಾರ ಇತ್ತು, ಅವಾಗ ಯಾಕೆ ಪ್ರಾರಂಭ ಮಾಡಲಿಲ್ಲ,ಬಹಳ ಹಿಂದೆ ಯೋಜನೆ ಅಗಬೇಕಿತ್ತು, ಕೋರ್ಟ್ ಕೇಸ್ ಕಾರಣದಿಂದ ವಿಳಂಬ ಆಯಿತು,ಆದರೆ ಬಿಜೆಪಿ ಈ ಯೋಜನೆ ಜಾರಿ ಮಾಡಲಿಲ್ಲ, ನಮ್ಮ ಸರ್ಕಾರ ಬಂದ ಬಳಿಕ ಯೋಜನೆ ಪ್ರಾರಂಭ ಮಾಡಿದ್ದೇವೆ,ವಕೀಲ ಪಾಲಿ‌ ನಾರಿಮನ್ ಜೊತೆ ಮಾತನಾಡಿ ಡಿಪಿಆರ್ ರೆಡಿ‌ ಮಾಡಿ ಕೇಂದ್ರಕ್ಕೆ ಕೊಟ್ಟಿದ್ದೇವೆ ಹಾಗಾದರೆ ಬಿಜೆಪಿ ಸರ್ಕಾರ ಇಲ್ಲಿವರೆಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.

Exit mobile version