Site icon PowerTV

‘ಪುಷ್ಪ’ ‘ಕೆಜಿಎಫ್​​’ ಕಾಪಿ?

ಬೆಂಗಳೂರು: ಒಂದು ಚಿತ್ರದಿಂದ ಪ್ರೇರಿತರಾಗಿ ಅಂಥವೇ ಮತ್ತೊಂದಿಷ್ಟು ಚಿತ್ರಗಳು ಬರುವುದು ಚಿತ್ರರಂಗದಲ್ಲಿ ಮಾಮೂಲು. ಕೆಲವೊಮ್ಮೆ ಯಾವುದೋ ಒಂದು ಚಿತ್ರವನ್ನು ಯಥಾವತ್ತಾಗಿ ಕಾಪಿ ಮಾಡಿ ಹೊಸ ಸಿನಿಮಾವನ್ನು ನಿರ್ಮಿಸಿದ್ದನ್ನು ನಾವು ನೋಡಿದ್ದೇವೆ. ಇದೀಗ ಪುಷ್ಪ ಚಿತ್ರದ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಒಟಿಟಿಯಲ್ಲಿ ‘ಪುಷ್ಪ’ ಸಿನಿಮಾ ನೋಡಿದ ನಂತರದಲ್ಲಿ ಕೆಲವರಿಗೆ ‘ಪುಷ್ಪ’ ಕಥೆಯ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ‘ಪುಷ್ಪ’ ಚಿತ್ರದ ಕಥೆ ದಿಟ್ಟೋ ಕೆಜಿಎಫ್​​ನಂತಿದೆ. ಪುಷ್ಪ ಚಿತ್ರ ತಂಡದವರು ಕೆಜಿಎಫ್ ಚಿತ್ರವನ್ನು ನೋಡಿ ಕಾಪಿ ಮಾಡುತ್ತಿದ್ದಾರೆ’ ಎಂದು ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಲಾಗಿದೆ. ಇದಕ್ಕೆ ಕೆಲವರು ‘ಕೆಜಿಎಫ್ ಕಥೆ ಆಧರಿಸಿಯೇ ಪುಷ್ಪ ಸಿನಿಮಾ ರೆಡಿ ಆಗಿದೆ’ ಎಂದು ಬರೆದುಕೊಂಡಿದ್ದಾರೆ.

Exit mobile version