Site icon PowerTV

BJP ನಾಡಿನ ಹಿತ ಕಾಯುತ್ತದೆ : ಸಚಿವ ಅಶ್ವಥ್ ನಾರಾಯಣ್​​

ರಾಮನಗರ : ನಮ್ಮ ನಾಡಿನ ನೆಲ ಜಲ ವಿಚಾರದಲ್ಲಿ ಬಿಜೆಪಿ ನಾಡಿನ ಹಿತ ಕಾಯುತ್ತದೆ. ನಾಡಿನ ಆಚಾರ ಸಂಸ್ಕ್ರತಿ ಕಾಪಾಡುವುದು ಬಿಜೆಪಿಯ ಮೊದಲ ಆದ್ಯತೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ರಾಮನಗರ ಹೊರವಲಯದ ಜಾನಪದ ಲೋಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೋಸ್ಕರ ನಾವು ಏನು ಮಾಡೋದಕ್ಕ ಹೋಗೊಲ್ಲ. 2008ರಿಂದ ನಮ್ಮ ಪಕ್ಷ ಕಾವೇರಿ ಬೇಸಿನ್ ನಲ್ಲಿ 10 ಕ್ಕೂ ಹೆಚ್ವು ಜಿಲ್ಲೆಗಳಲ್ಲಿ ನೀರಾವರಿ ಅಭಿವೃದ್ಧಿ ಮಾಡಿದ್ದೇವೆ.

ಅಂದಿನ ಸಿಎಂ  ಬಿಎಸ್‌ವೈ ಹಾಗೂ ನೀರಾವರಿ ಸಚಿವ ಬೊಮ್ಮಾಯಿ ನೇತೃತ್ವದಲ್ಲಿ ನೀರಾವರಿ ಯೋಜನೆ ಜಾರಿಗೆ ತಂದಿದ್ದೇವೆ. ಚನ್ನಪಟ್ಟಣ ಇಗ್ಗಲೂರಿನ ಬ್ಯಾರೇಜ್​​ನಲ್ಲಿ ಲೈಫ್ ಇರಿಗೇಷನ್ ಮಾಡಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ.

ಎನ್ ವರ್ಲಾಮೇಂಟ್ , ಕಾವೇರಿ ನೀರಾವರಿ ಪ್ರಾಧಿಕಾರ, ಇವು ಹೀಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಈ‌ ವಿಚಾರಗಳು ಇರುವುದರಿಂದ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತೊಂದರೆಯಾಗಿದೆ. ಅಲ್ಲದೆ ಅಣೆಕಟ್ಟು ನಿರ್ಮಾಣ ಮಾಡೇ ಮಾಡ್ತೀವಿ ಅಂತಾ ಸಿಎಂ ಕೂಡ ಹೇಳಿದ್ದಾರೆ. ಕೇಂದ್ರದ ಜನಸಂಪನ್ಮೂಲ ಸಚಿವರ ಜೊತೆ ಸಿಎಂ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Exit mobile version