Site icon PowerTV

ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂದ ಹೊನ್ನಾಳಿ ಹೋರಿ!

ಹೊನ್ನಾಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ಡಿಕೆಶಿ ಅಣ್ಣ ಇದು ಹೊನ್ನಾಳಿ ಕೋಟೆ. ಇದನ್ನ ಭೇದಿಸೋಕೆ ಆಗಲ್ಲ. ಹೊನ್ನಾಳಿ ಜನರು ನನ್ನ ಸುತ್ತಲೂ ಕೋಟೆ ಕಟ್ಟಿದ್ದಾರೆ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.

ಡಿ.ಕೆ.ಶಿವಕುಮಾರ್ ವಿಡಿಯೋ ದಾಖಲೆ ಇದೆ ಅಂತ ಹೇಳ್ತಾರೆ. ಇಂತಹ ಕೋಟೆಯಲ್ಲಿ ಬಂದು ವಿಡಿಯೋ ಮಾಡಿಸಿದ್ದೀನಿ, ಕೇಸ್ ಹಾಕಿ ಅಂತೀರಲ್ಲ! ಎಸ್.ಪಿ ಕೂಡ ನಿನ್ನೆ ಫೋನ್ ಮಾಡಿದ್ರು, ಪಕ್ಷಕ್ಕೆ ಮುಜುಗರ ಆಗಬಾರದು ಅಂತ ಕ್ಷಮೆ ಕೇಳಿದ್ದೇನೆ ಎಂದರು ರೇಣುಕಾಚಾರ್ಯ. ಕ್ಷೇತ್ರದ ಜನ ಹೇಳಿದರೆ ನಾನು ಬಾವಿಗೆ ಬೀಳೋದಕ್ಕೂ ರೆಡಿ. ನನ್ನ ಕ್ಷೇತ್ರದ ಜನ ಏನು ಹೇಳ್ತಾರೋ ನಾನು ಅದನ್ನು ಮಾಡಲು ಸಿದ್ಧ. ರಾಜಕಾರಣ ಮಾಡುವ ಸಂದರ್ಭದಲ್ಲಿ ನಾನೂ ರಾಜಕಾರಣ ಮಾಡ್ತೀನಿ. ನಾನೇನೂ ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ ಎಂದು ನಿನ್ನೆ ಕೊರೋನಾ ನಿಯಮ ಉಲ್ಲಂಘನೆಯನ್ನು ಸಮರ್ಥಿಸಿಕೊಂಡರು.

Exit mobile version