Site icon PowerTV

ಸ್ಪುಟ್ನಿಕ್ ಲಸಿಕೆ ಪಡೆದವರಿಗಿಲ್ಲ ಬೂಸ್ಟರ್ ಡೋಸ್..!

ರಾಜ್ಯ : ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನಾ ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿದೆ. ಕೊರೋನಾ ವಿರುದ್ಧ ರಕ್ಷಣೆ ಪಡೆಯಲು 2 ಡೋಸ್​​​ ಕೊರೋನಾ ಲಸಿಕೆ ನೀಡಲಾಗಿತ್ತು. ಆದರೂ ದೇಶದಲ್ಲಿ ಕೊರೋನಾರ್ಭಟ ಕಂಟ್ರೋಲ್​ಗೆ ಬಂದಿಲ್ಲ.ಹೀಗಾಗಿ ಮುಂಜಾಗ್ರತಾ ದೃಷ್ಟಿಯಾಗಿ ಬೂಸ್ಟರ್​​​ ಡೋಸ್​​ ನೀಡಲು ಸರ್ಕಾರ ಮುಂದಾಗಿದ್ದು, ಬೂಸ್ಟರ್​​​ ಡೋಸ್​​​​ ಲಸಿಕಾಭಿಯಾನಕ್ಕೆ ಚಾಲನೆ ಸಿಕ್ಕಿದೆ.

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ತೀವ್ರತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಜ್ಞರ ಸೂಚನೆ ಮೇರೆಗೆ ಫ್ರಂಟ್ ಲೈನ್ ವಾರಿಯರ್ಸ್​ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್​​ ಡೋಸ್​​ ನೀಡಲು ಸೋಮವಾರ ಚಾಲನೆ ಸಿಕ್ಕಿತ್ತು. ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೂಸ್ಟರ್ ಡೋಸ್​​ಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಆರೋಗ್ಯ ಸಚಿವ ಸುಧಾಕರ್, ಬೆಂಗಳೂರು ನಗರ ಡಿಸಿ ಮಂಜುನಾಥ್​​ ಹಾಗೂ ಬಿಬಿಎಂಪಿ ಕಮಿಷನರ್ ಉಪಸ್ಥಿತರಿದ್ದರು.

ಇನ್ನು ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಂದರೆ 39 ವಾರಗಳನ್ನು ಪೂರೈಸಿದ ಒಟ್ಟು 13 ಲಕ್ಷ ಫ್ರಂಟ್​​​​ ಲೈನ್​ ವಾರಿಯರ್ಸ್​ ಹಾಗೂ 8 ಲಕ್ಷ ಜನ 60 ವರ್ಷ ಮೇಲ್ಪಟ್ಟ ಫಲಾನುಭವಿಗಳು ಬೂಸ್ಟರ್​​​ ಲಸಿಕ ಪಡೆಯಲಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋವಿಡ್​ ಸೋಂಕಿನಿಂದ ರಕ್ಷಣೆ ಪಡೆಯಲು ರಕ್ಷಾ ಕವಚ ಬೇಕಿದೆ ಇದಕ್ಕೆ ವ್ಯಾಕ್ಸಿನೇಷನ್ ಅಗತ್ಯ ಎಂದರು.

ಮೊದಲ ದಿನ ಬೂಸ್ಟರ್ ಡೋಸ್ ಪಡೆದ ವೈದ್ಯೆ ಮೇಘಾ ಮಾತನಾಡಿ. ಬೂಸ್ಟರ್ ಲಸಿಕೆ ಪಡೆದಿದಕ್ಕೆ ನನಗೆ ಧೈರ್ಯ ಬಂದಿದೆ. ನಾನು ಸೆಕೆಂಡ್ ಡೋಸ್ ಪಡೆದು 9ತಿಂಗಳು ಆಗಿದೆ. ಹೀಗಾಗಿ ನಾನು ಬೂಸ್ಟರ್ ಡೋಸ್ ಲಸಿಕೆ ತಗೆದುಕೊಂಡಿದ್ದೇನೆ. ಸರ್ಕಾರ ಮಾಡುತ್ತಿರುವುದು ಜನರ ಒಳತಿಗಾಗಿ. ದಯವಿಟ್ಟು ಬೂಸ್ಟರ್ ಡೋಸ್ ತೆಗೆದುಕೊಂಡು ಕೊರೋನಾದಿಂದ ಸೇಫಾಗಿರಿ ಎಂದು ಮನವಿ ಮಾಡಿಕೊಂಡರು.

ಇತ್ತ ಸ್ಪುಟ್ನಿಕ್ ಲಸಿಕೆ ಪಡೆದಂತವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.‌ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಲಸಿಕೆ ಭಾರತದಾಗಿದೆ. ಆದ್ರೆ ಸ್ಪುಟ್ನಿಕ್ ಲಸಿಕೆ ಬೇರೆ ದೇಶದಾಗಿದ್ದು, ಈಗಾಗಿ ಕೇಂದ್ರ ಸರ್ಕಾರ ಅವಕಾಶ ನೀಡಿಲಿಲ್ಲ. ಒಟ್ಟಿನಲ್ಲಿ ಸೋಮವಾರದಿಂದ ಬೂಸ್ಟರ್ ಡೋಸ್ ಲಸಿಕೆಗೆ ಚಾಲನೆ ಸಿಕ್ಕಿದ್ದು, ಕೊರೊನಾ ವಾರಿಯರ್ಸ್​ಗೆ ಬಲಬಂದತಾಗಿದೆ.

Exit mobile version