Site icon PowerTV

ಕೋವಿಡ್ ಕೇಂದ್ರದ ವಿರುದ್ಧ ಸಚಿವ ನಾರಾಯಣ ಗೌಡ ಗರಂ

ಮಂಡ್ಯ : ಕೊವಿಡ್ ಕೇಂದ್ರದಲ್ಲಿ ಸಚಿವ ನಾರಾಯಣ ಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ. ಶ್ರೀಧರ್ ಹಾಗೂ ತಹಶೀಲ್ದಾರ್ ಶ್ವೇತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣದ ಕೊವಿಡ್ ಕೇರ್ ಕೇಂದ್ರಕ್ಕೆ ಭೇಟಿ ಕೊಟ್ಟ ವೇಳೆ ಘಟನೆ ನಡೆದಿದ್ದು, ಕೊವಿಡ್ ಸೋಂಕಿತರಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ದೂರು ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗೂ ಬಿಜೆಪಿ ಮುಖಂಡನ ವಿರುದ್ಧ ಕಿಡಿ ಕಾರಿದರು.

ನಾನು ಇಲ್ಲಿ ಆಟ ಆಡೋಕ್ಕೆ ಬಂದಿಲ್ಲ ಮೇಡಂ ಎಂದ್ರು. ಇನ್ನು ತಹಶೀಲ್ದಾರ್​ಗೆ ಸಪೋರ್ಟ್ ಮಾಡಿದ ಬೆಂಗಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದು , ಪುಕ್ಸಟ್ಟೆ ಸಪೋರ್ಟ್ ಮಾಡೋಕಲ್ಲ ನೀವು ಬಂದಿರೋದು ಸಪೋರ್ಟ್ ಮಾಡೋದಾದ್ರೆ, ಅವರ ಮನೆಯಲ್ಲಿ ಮಾಡಿ. ಅವರು ಮಾಡ್ತಿರುವ ತಪ್ಪನ್ನು ನಾನು ಹೇಳ್ತಿದ್ದೇನೆ ಎಂದು ಕಿಡಿಕಾರಿದ್ದಾರೆ.

Exit mobile version