Monday, September 15, 2025
HomeUncategorizedನಾನು ಫಿಟ್​​​ ಇದ್ದೇನೆ - ಡಿಕೆಶಿ

ನಾನು ಫಿಟ್​​​ ಇದ್ದೇನೆ – ಡಿಕೆಶಿ

ರಾಮನಗರ: ನನ್ನನ್ನು ನೋಡಿದರೆ ಕೊರೊನಾ ಲಕ್ಷಣಗಳು ಇದೆ ಎಂದು ಅನ್ನಿಸುತ್ತಾ? ನನಗೆ ಕೊರೊನಾ ಟೆಸ್ಟ್ ಮಾಡಿ ಪಾಸಿಟಿವ್ ಅಂತ ಹೇಳಿದರೆ, ಯಾತ್ರೆ ಹತ್ತಿಕ್ಕಬಹುದು ಅಂತ ಬಿಜೆಪಿ ಅವರು ತಿಳಿದಿದ್ದಾರೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾತ್ರಿ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ಅಧಿಕಾರಿಗಳನ್ನು ಕಳಿಸಿದ್ದರು. ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ನನ್ನ ಹತ್ತಿರ ಹತ್ತು ಜನರ ವೈದ್ಯರ ತಂಡ ಇದೆ ಅಂತ. ನಿನ್ನೆ ಸಮರ್ಥವಾಗಿ ನಡೆದಿದ್ದೇನೆ. ಎಲ್ಲೂ ಕೂಡ ಸುಸ್ತಾಗಿಲ್ಲ. ನಿನ್ನೆ ಕರ್ಫ್ಯೂ ನೆಪದಲ್ಲಿ, ನಮ್ಮ ಕಾರ್ಯಕರ್ತರ ಬಸ್‍ಗಳನ್ನು ಹಿಡಿದಿದ್ದರು. ಇಂದು ಕರ್ಫ್ಯೂ ಇಲ್ಲ. ಪಾದಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನ ಬರುತ್ತಾರೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments