Site icon PowerTV

ಕುಟುಂಬದೊಂದಿಗೆ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ತಮ್ಮ 36ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ತಮ್ಮ ಸಲೆಬ್ರೆಶನ್ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಜನ್ಮ ದಿನಗಳಿಗೆ ನಾನು ಎಂದಿಗು ಉತ್ಸುಕವನಾಗಿಲ್ಲ. ಆದರೆ ಈ ಸಂತೋಷವನ್ನು ನನ್ನ ಸುತ್ತಲಿರುವವರ ಜೊತೆ ನೋಡಿದ್ದೇನೆ. ಈಗ ವಿಶೇಷವಾಗಿ ನನ್ನ ಮಕ್ಕಳೊಂದಿಗೆ , ನನ್ನನ್ನು ಸೇರಿಸಿಕೊಳ್ಳುವ ಹಾಗೇ ಮಾಡಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳಿಗೆ ನಾನು ಚಿರಖುಣಿ. ನನ್ನ ಪ್ರತಿಯೊಬ್ಬ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ ಎಂದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪನ ಬರ್ತ್​ಡೆಗೆ ಐರಾ ಮತ್ತು ಯಥರ್ವ್​ ಹೃದಯದ ಚಿತ್ರ ಬರೆದು, ಅದರೊಳಗೆ ಐರಾ ಮತ್ತು ಯಥರ್ವ್​ ಅಂಗೈ ಮುದ್ರೆ ಒತ್ತಿರುವ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತ್​ಡೇ ಡಡ್ಡಾ ಎಂದು ಬರೆದಿದ್ದಾರೆ. ಇನ್ನೂ ಈ ಮುದ್ದಾದ ಉಡುಗೊರೆಯ ಫೋಟೋವನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

Exit mobile version