Site icon PowerTV

ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟ ಬಂದ್

ವಿಜಯಪುರ : ಕೊರೋನಾ ಹಿನ್ನಲೆಯಲ್ಲಿ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ, ವಿಶ್ವ ವಿಖ್ಯಾತ ಗೋಳಗುಮ್ಮಟ ಪ್ರವೇಶಕ್ಕೆ ಭಾರತೀಯ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.

ಪ್ರವಾಸಿಗರು ಇಲ್ಲದೆ ಗೋಳಗುಮ್ಮಟ ಆವರಣ ಬಿಕೋ ಎನ್ನುತ್ತಿದೆ, ಖಾಲಿ ಖಾಲಿಯಾಗಿರೋ ಗುಮ್ಮಟದ ಆವರಣವನ್ನು ಕೆಲಸಗಾರರು ಸ್ವಚ್ಛಗೊಳಿಸುತ್ತಿದ್ದಾರೆ. 50 ಕ್ಕು ಅಧಿಕ ಕೆಲಸಗಾರರಿಂದ ಗೋಳಗುಮ್ಮಟ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಗೋಳಗುಮ್ಮಟ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ಪ್ಯೂ ಹಿನ್ನಲೆ ಎರಡು ದಿನಗಳ ಕಾಲ ಅಧಿಕಾರಿಗಳು ಗೋಳಗುಮ್ಮಟ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.

Exit mobile version