Site icon PowerTV

23 ಪೊಲೀಸರಿಗೆ ಕೊರೋನಾ ದೃಢ

ಹಾಸನ : ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ 23 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಓರ್ವ ಇನ್ಸ್‌ಪೆಕ್ಟರ್, ಓರ್ವ ಸಬ್ ಇನ್ಸ್‌ಪೆಕ್ಟರ್, 21 ಕಾನ್ಸ್‌ಟೇಬಲ್‌ಗಳಿಗೆ ಕೊರೋನಾ ವೈರಸ್ ಅಟ್ಯಾಕ್ ಆಗಿದೆ. ಹಾಸನ ನಗರದಲ್ಲಿಯೇ ಅತಿ ಹೆಚ್ಚು ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಟ್ರಾಫಿಕ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರಿಗೆ ಸೋಂಕು ತಗುಲಿರೋದು ಖಚಿತವಾಗಿದೆ.

ಜಿಲ್ಲೆಯ ಎಲ್ಲಾ ಪೊಲೀಸರಿಗೂ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಜನವರಿ 7 ಮತ್ತು 8ರಂದು ಒಟ್ಟು 23 ಪೊಲೀಸರಿಗೆ ಕೊರೊನಾ ದೃಢಪಟ್ಟಿದೆ. ಸದ್ಯ ಎಲ್ಲರನ್ನೂ ಹೋಂ ಕ್ವಾರಂಟೀನ್ ಮಾಡಿದ್ದು, ಪೊಲೀಸ್ ಇಲಾಖೆಯೇ ಚಿಕಿತ್ಸೆ ಕೊಡಿಸುತ್ತಿದೆ. ಪ್ರಾಥಮಿಕ ಸಂಪರ್ಕದಲ್ಲಿ ಇರುವವರಿಗೂ ಇಂದು ಕೊವಿಡ್ ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ.

Exit mobile version