Site icon PowerTV

ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿದ್ದ ಮೊಸಳೆ ಮರಿ

ಶಿವಮೊಗ್ಗ : ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿದ್ದ ಮೊಸಳೆ ಮರಿ ಕಂಡು ಬೆಚ್ಚಿಬಿದ್ದ ಘಟನೆ ಪಿಳ್ಳಂಗಿರಿ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಸಿಕ್ಕಿದೆ. ಮೀನಿಗೆ ಗಾಳ ಹಾಕಿದ್ದ ರಶೀದ್ ಗಾಳ ಜಗ್ಗಿದಂತಾಗಿದೆ, ಕೂಡಲೇ ಅವರು ಗಾಳವನ್ನು ಎಳೆದು ನೋಡಿದಾಗ ಮೀನಿನ ಬದಲು ಮೊಸಳೆ ಮರಿ ಸಿಕ್ಕಿ ಬಿದ್ದಿದೆ. ಗಾಳದಲ್ಲಿ ಮೀನಿನ ಬದಲು ಮೊಸಳೆ ಮರಿ ಕಂಡು ಗಾಬರಿಗೊಂಡ ಜನರು ಕೂಡಲೇ ಅರಣ್ಯ ಇಲಾಖೆಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕೂಡಲಿಯಲ್ಲೂ ಮೊಸಳೆ ಪ್ರತ್ಯಕ್ಷವಾಗಿತ್ತು. ಮೊಸಳೆ ಸಂತಾನೋತ್ಪತ್ತಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ತುಂಗಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಭಾಗದ ಜನರಲ್ಲಿ ಭಯ ಮೂಡಿಸಿದೆ.

Exit mobile version