Site icon PowerTV

ನಟ ಮಹೇಶ್ ಬಾಬು ಸೋದರ ನಿಧನ

ಹೈದರಬಾದ್ : ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಟ ಅವರ ಹಿರಿಯ ಮಗ ರಮೇಶ್ ಬಾಬು ನಿನ್ನೆ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಟಾಲಿವುಡ್ ನಟ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು , ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು. ಇದೇ ಸಂದರ್ಭದಲ್ಲಿ ನಟ ಮಹೇಶ್ ಬಾಬುಗೆ ಕೋವಿಡ್ ಪಾಸಿಟಿವ್ ಬಂದಿದ್ದು ಇದು ಅತ್ಯಂತ ದುಃಖದ ಸಂಗತಿಯಾಗಿದೆ.

ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ್, ನಿನ್ನೆ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಕುಟುಂಬಸ್ಥರು ಗಚ್ಚಿಬೌಲಿಯ ಎಐಜಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿಗೆ ತಲುಪಿದಾಗ ವೈದ್ಯರು ರಮೇಶ್ ನಿಧನರಾಗಿರುವುದನ್ನು ದೃಢಪಡಿಸಿದ್ದಾರೆ. ಸೋದರನ ನಿಧನದಿಂದ ಮಹೇಶ್ ಬಾಬು, ಕುಟುಂಬವರ್ಗ ಹಾಗೂ ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದಾರೆ. ರಮೇಶ್ ಬಾಬು ನಿಧನದಿಂದ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ..

Exit mobile version