Site icon PowerTV

ಸಿಲಿಕಾನ್ ಸಿಟಿಯಲ್ಲಿ ಸಿಕ್ಕಿ ಬಿದ್ದ 200ಕೆಜಿ ಗಾಂಜಾ ಪೆಡ್ಲರ್ ಗಳ ಗ್ಯಾಂಗ್

ಬೆಂಗಳೂರು : ಕೊರೋನಾ ಒಂದು ಕಡೆಯಿಂದ ಇದ್ದರೆ ಗಾಂಜಾ ಮಾರಾಟಗಾರರು ತಮ್ಮದೇ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ.

ಕೆಂಪೇಗೌಡನಗರ ಪೊಲೀಸರು ರಮೇಶ್, ಕೊಂಡಾಜಿ, ಪೆದ್ದಂ, ಪೋವಯ್ಯ ನಾಲ್ವರು ಗಾಂಜಾ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಇವರಿಂದ 200ಕೆಜಿ ಗಾಂಜಾವನ್ನು ವಶಪಡಿಸಿದ್ದಾರೆ. ಬಂಧಿತ ಆರೋಪಿಗಳು ಆಂದ್ರಪ್ರದೇಶದಿಂದ ತಮಿಳುನಾಡಿಗೆ ಟಾಟಾ ಏಸ್ ವಾಹನದಲ್ಲಿ 200 ಕೆ.ಜಿ ಗಾಂಜಾ ಸಪ್ಲೈ ಮಾಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೆಂಪೇಗೌಡ ನಗರ ಪೊಲೀಸರು ಕೂಡಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಕೆಂಪೇಗೌಡನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version