Site icon PowerTV

IPL ನ ವಿಂಡೀಸ್ ಕ್ರಿಕೆಟರ್ ಬ್ರಾವೊಗಿದ್ದಾರೆ ಮೂವರು ಗರ್ಲ್​ಫ್ರೆಂಡ್​ಗಳು

IPL ಎಂಬ ಕಲರ್​ಫುಲ್ 20-20 ಚುಟುಕು ಕ್ರಿಕೆಟ್ ಆಟದಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ಬ್ರಾವೊನ ಖಾಸಗೀ ರಹಸ್ಯವೊಂದು ಹೊರಬಿದ್ದಿದೆ. ಡಯಾನ್ ಬ್ರಾವೊ ವೆಸ್ಟ್​ಇಂಡೀಸ್​ನ ದೈತ್ಯ ಪ್ರತಿಭೆ. ಅದ್ಭುತ ಆಲ್​ರೌಂಡರ್ ಆಗಿರುವ ಬ್ರಾವೊ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಆದರೆ ತಮ್ಮ ಅದ್ಭುತ ಪ್ರದರ್ಶನವನ್ನು 20-20ಯ ಚುಟುಕು ಕ್ರಿಕೆಟ್​ನಲ್ಲಿ ತೋರಿಸುತ್ತಿದ್ದಾರೆ. ಅದರಲ್ಲೂ IPL ನ CSK ತಂಡದ ಪರವಾಗಿ ಆಡುವ ಈ ವಿಂಡೀಸ್ ದೈತ್ಯ ಅದರ ಗೆಲುವಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂಥ ಬ್ರಾವೊ ಬಗ್ಗೆ ಹೊರಬಿದ್ದಿರುವ ಖಾಸಗಿ ರಹಸ್ಯದಿಂದ ಬ್ರಾವೊ ಬೇಜಾರೇನೂ ಆಗಿಲ್ಲ. ಅದನ್ನು ತಮಾಷೆಯಾಗಿಯೇ ತೆಗೆದುಕೊಂಡಿದ್ದಾರೆ.

CSKಯ ಮತ್ತೊಬ್ಬ ಆಟಗಾರನಾದ ದಿಪಕ್ ಚಹರ್ ಬ್ರಾವೊನ ಈ ಸಿಕ್ರೆಟನ್ನು ಬಿಚ್ಚಿಟ್ಟಿದ್ದಾನೆ. ಕಪಿಲ್ ಶರ್ಮ ಶೋನಲ್ಲಿ ಚಹರ್ ಬ್ರಾವೊಗೆ ಮೂವರು ಗರ್ಲ್​ಫ್ರೆಂಡ್ಸ್ ಇದ್ದಾರೆ ಎಂದು ಹೇಳಿದ್ದಾನೆ. ಬ್ರಾವೊ ಇದರ ಜೊತೆಗೆ ತಾನು ಈ ಬಾರಿ CSK ಯ ಪರವಾಗಿಯೇ ಆಡುವುದು ಸಂದೇಹ ಎಂದು ಬಾಂಬ್ ಹಾಕಿದ್ದಾನೆ. ಈ ಬಾರಿ ನಾನು ಹರಾಜಿಗೆ ಒಳಗಾಗಲಿದ್ದೇನೆ. ನಾನಿನ್ನೂ ಮಾರಾಟವಾಗುವ ಸರಕು ಎಂದುಕೊಂಡಿದ್ದೇನೆ. ಹಾಗಾಗಿ ನನ್ನನ್ನು ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಯಾರು ನನ್ನನ್ನು ಕೊಳ್ಳಲಿದ್ದಾರೆ, ನಾನು ಯಾರ ಪರವಾಗಿ ಆಡಲಿದ್ದೇನೆ ಎಂಬುದನ್ನು ಈಗಲೇ ಹೇಳಲಾಗದು ಎಂದು ಹೇಳಿಕೊಂಡಿದ್ದಾನೆ.

Exit mobile version