Site icon PowerTV

ಮೇಕೆ‘ದಾಟಲು’ ಖಾಕಿ ಕಡಿವಾಣ

ರಾಮನಗರ : ರಾಜ್ಯದಲ್ಲಿ ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ, ಮೇಕೆದಾಟು ಪಾದಯಾತ್ರೆ ತಡೆಯಲು ಪೊಲೀಸರಿಂದ ಸಕಲ ಸಿದ್ಧತೆ ನಡೆದಿದೆ. ರಾಮನಗರ ಪೊಲೀಸರಿಂದ ಬಿಗಿ ಬಂದೋಬಸ್ತ್ ಗೆ ಸಜ್ಜಾಗಿದ್ದು, ಇಂದು ಮಧ್ಯಾಹ್ನ ಒಂದು ಗಂಟೆ ನಂತರ ಸಂಗಮ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಸುಮಾರು 2000 ಕ್ಕೂ ಹೆಚ್ಚು ಪೋಲಿಸರ ನಿಯೋಜನೆ ಮಾಡಲಾಗಿದೆ. ಬೆಳಿಗ್ಗೆ 10 ಘಂಟೆಗೆ ಎಲ್ಲ ಪೋಲಿಸರು ಕನಕಪುರದಲ್ಲಿ ಹಾಜರಾಗುವಂತೆ ಪೋಲಿಸರು ಸೂಚನೆ ನೀಡಿದ್ದಾರೆ. ಕನಪುರದ ಕೇಂದ್ರ ವಲಯಕ್ಕೆ ಐಜಿಪಿ ಚಂದ್ರಶೇಖರ್​ ಭೇಟಿ ನೀಡಿ ಬಂದೋಬಸ್ತ್​ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲಿದ್ದಾರೆ. ಸಂಗಮ ಅರಣ್ಯ ಪ್ರದೇಶಕ್ಕೆ ಯಾರು ಹೋಗದಂತೆ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ. ಸಂಗಮಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳಿಗೂ ಪೋಲಿಸರಿಂದ ನಾಕಾಬಂದಿ ಹಾಕಿದ್ದಾರೆ.

Exit mobile version