Site icon PowerTV

ಡಿಕೆಶಿಗೆ ಸಚಿವ ಸುಧಾಕರ್​​ ಟಕ್ಕರ್​​​​​​​​​

ಬೆಂಗಳೂರು : ರಾಜ್ಯದಲ್ಲಿ ಪಾಸಿಟಿವಿಟ್ ದರ ಶೇ 2 ಸಹ ಇಲ್ಲ, ಸರ್ಕಾರದ್ದು ಸುಳ್ಳು ಲೆಕ್ಕ ಎಂಬ ಡಿಕೆಶಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್​​ ಕೋವಿಡ್ ಬಗ್ಗೆ ಡಿಕೆಶಿಗೆ ಮಾಹಿತಿಯ ಕೊರತೆ ಇದೆ ಎಂದು ಟಕ್ಕರ್​​ ಕೊಟ್ಟಿದ್ದಾರೆ.

ಡಿಕೆಶಿ ಆರೋಪಕ್ಕೆ ನಾನು ಏನೂ ಮಾತಾಡಲ್ಲ. ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ. ಇಡೀ ವಿಶ್ವದಲ್ಲಿ ಯಾವ ವಿರೋಧ ಪಕ್ಷವೂ ಸರ್ಕಾರದ ಕೋವಿಡ್ ನಿಯಂತ್ರಣ ಟೀಕಿಸಿಲ್ಲ. ಇಡೀ ವಿಶ್ವದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಲು ಹೋಗಿಲ್ಲ. ಎಲ್ಲ ಕಡೆಯೂ ವಿಪಕ್ಷಗಳು ಸರ್ಕಾರದ ಜೊತೆ ಕೈ ಜೋಡಿಸಿವೆ. ನಮ್ಮಲ್ಲಿ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ಇಂಥ ಸಮಯದಲ್ಲಿ ರಾಜಕಾರಣ ಸರಿಯಲ್ಲ ಎಂದು ಹೇಳಿದರು.

Exit mobile version