Site icon PowerTV

ರಾಜ್ಯದಲ್ಲಿ 87 ಯೋಜನೆಗಳಿಗೆ ಅನುಮೋದನೆ : ಸಚಿವ ಮುರುಗೇಶ್​​ ನಿರಾಣಿ

ಕರ್ನಾಟಕ : ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು, 4,236 ಕೋಟಿ ರೂ. ಮೊತ್ತದ 87 ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್​​ ನಿರಾಣಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 12,251ಕ್ಕೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆ ಇದೆ. 2,986 ಕೋಟಿ ಮೌಲ್ಯದ ಈ ಯೋಜನೆಗಳಿಗೂ ರಾಜ್ಯದಲ್ಲಿ 4,660 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ 15 ಕೋಟಿ ಗಿಂತ ಹೆಚ್ಚಿನ ಹಾಗೂ 50 ಕೋಟಿ ಗಿಂತ ಕಡಿಮೆ ಹೂಡಿಕೆಯ 74 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Exit mobile version