Site icon PowerTV

ಫ್ಯಾನ್ ಟ್ಯಾಟೂಗೆ ನಟ ರಾಮ್ ಚರಣ್ ಫಿದಾ

ಟಾಲಿವುಡ್ ಸ್ಟಾರ್ ರಾಮ್ ಚರಣ್ ಅಭಿಮಾನಿಯೊಬ್ಬರು ‘RRR’ ಸಿನಿಮಾದಲ್ಲಿ ಅವರ ಅವತಾರವನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಅದನ್ನು ನೋಡಿ ರಾಮ್ ಅವರು ಫಿದಾ ಆಗಿದ್ದಾರೆ.

ರಾಮ್ ಚರಣ್ ದಕ್ಷಿಣ ಭಾರತದ ಪ್ರಮುಖ ಸೂಪರ್‌ಸ್ಟಾರ್ ಚಿರಂಜೀವಿಯವರ ಮಗನಾಗಿದ್ದು, ಟಾಲಿವುಡ್‍ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ತಂದೆಯಂತೆ ಸೂಪರ್ ಸ್ಟಾರ್ ಗರಿಯನ್ನು ತಮ್ಮ ಮೂಡಿಗೆ ಏರಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಎಸ್‍ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾದಲ್ಲಿ ನಟಿಸಿದ್ದು, ಪ್ರಚಾರದಲ್ಲಿ ನಿರತರಾಗಿದ್ದಾರೆ.

ಮುಂಬೈನಲ್ಲಿ ಪ್ರಚಾರದ ವೇಳೆ ಅಭಿಮಾನಿಯೊಬ್ಬರು ರಾಮ್ ಚರಣ್ ಅವರ ಬಳಿ ಫೋಟೋಗಾಗಿ ಬಂದಿದ್ದು, ಅವರು ಹಾಕಿಸಿಕೊಂಡಿದ್ದ ಟ್ಯಾಟೂವನ್ನು ತೋರಿಸಿದ್ದಾರೆ. ಈ ಟ್ಯಾಟೂ ನೋಡಿದ ರಾಮ್ ಸಂತೋಷ ವ್ಯಕ್ತಪಡಿಸಿದ್ದಾರೆ.

Exit mobile version