Site icon PowerTV

ಆಸ್ಕರ್​​​ ವಿಜೇತ ಸಿಡ್ನಿ ನಿಧನ

ಲಾಸ್‌ ಏಂಜಲೀಸ್ : ಆಸ್ಕರ್‌ ವಿಜೇತ ಮೊದಲ ಕಪ್ಪುವರ್ಣೀಯ ಬಹಮಿಯನ್‌-ಅಮೆರಿಕನ್‌ ನಟ ಸಿಡ್ನಿ ಪೊಯ್ಟಿಯರ್‌ ( 94 ) ನಿಧನರಾಗಿದ್ದಾರೆ.

1963ರಲ್ಲಿ ʻಲಿಲೀಸ್ ಆಫ್ ದಿ ಫೀಲ್ಡ್ʼ ಚಲನಚಿತ್ರ ತೆರೆ ಕಂಡು ದೊಡ್ಡ ಮೈಲಿಗಲ್ಲನ್ನೇ ಸೃಷ್ಟಿಸಿತು. ಸಿನಿಮಾದಲ್ಲಿ ಸಿಡ್ನಿ ಅವರ ಅತ್ಯುತ್ತಮ ನಟನೆಗೆ ಆಸ್ಕರ್‌ ಒಲಿಯಿತು. ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ಮೊದಲ ಕಪ್ಪು ವರ್ಣೀಯ ಎಂಬುದು ಮತ್ತೊಂದು ಇತಿಹಾಸ.

ಸಿಡ್ನಿ ಅವರು 1927ರಲ್ಲಿ ಬಹಮಿಯನ್‌ ರೈತ ಕುಟುಂಬದಲ್ಲಿ ಜನಿಸುತ್ತಾರೆ. ನಂತರ 1940ರಲ್ಲಿ ಸಿನಿಮಾ ರಂಗದಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಲಿಲೀಸ್ ಆಫ್ ದಿ ಫೀಲ್ಡ್ ಸಿನಿಮಾದಲ್ಲಿ ಅತ್ಯುತ್ತಮ ನಟನೆಗಾಗಿ 1964ರಲ್ಲಿ ಆಸ್ಕರ್‌ ಪ್ರಶಸ್ತಿ ವಿಜೇತರಾದರು. ನಂತರ 2002ರಲ್ಲಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾದರು. 2009ರಲ್ಲಿ ಬರಾಕ್‌ ಒಬಾಮರಿಂದ ಯುಎಸ್‌ ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ದೇಶದ ಅತ್ಯುನ್ನತ ನಾಗರಿಕ ಗೌರವವಾಗಿ ಪಡೆದರು.

Exit mobile version