Site icon PowerTV

ಗುಂಡು ಹೊಡೆದ್ರೂ ಪಾದಯಾತ್ರೆ ಬಿಡಲ್ಲ : ಶಾಸಕ ನಾಗೇಂದ್ರ

ಕಾಂಗ್ರೆಸ್​​ನಿಂದ ಮೇಕೆದಾಟು ಪಾದಯಾತ್ರೆ ಹಿನ್ನೆಲೆ, ಬಳ್ಳಾರಿಯಿಂದ ಪಾದಯಾತ್ರೆಗೆ ಬೆಂಬಲ ನೀಡಲು ಗ್ರಾಮೀಣ ಶಾಸಕ ನಾಗೇಂದ್ರ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಹೊರಟಿದ್ದಾರೆ.

ವೀಕೆಂಡ್​​​ ಕರ್ಫ್ಯೂ ನಡುವೆಯೂ ಬೆಂಬಲಿಗರನ್ನ ಕರೆದುಕೊಂಡು ಶಾಸಕ ನಾಗೇಂದ್ರ ಹೊರಟಿದ್ದಾರೆ. ಈ ವೇಳೆ ಮಾತನಾಡಿದ ಶಾಸಕರು, ಏನೇ ಆಗಲಿ ಪಾದಯಾತ್ರೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗುಂಡು ಹೊಡೆದ್ರೂ ಪಾದಯಾತ್ರೆ ಬಿಡಲ್ಲ ಎಂದು ಎಚ್ಚರಿಸಿದರು. ಬಳ್ಳಾರಿಯಿಂದ 40 ವಾಹನಗಳಲ್ಲಿ ಕಾರ್ಯಕರ್ತರು ತೆರಳಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ .

ವೀಕೆಂಡ್ ಕರ್ಪ್ಯೂ ಕೇವಲ ನಮ್ಮ ಹೋರಾಟ ಹತ್ತಿಕಲು ಮಾತ್ರ. ಜನ ಪರ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೆ ಇರತ್ತದೆ, ಬಿಜೆಪಿ ಕುತಂತ್ರ ನಡೆಯಲ್ಲ. ಅರೆಸ್ಟ್ ಮಾಡಲಿ,ಕೇಸ್ ಹಾಕಲಿ ನಾವು ನಮ್ಮ ಹೋರಾಟ ಬಿಡಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

Exit mobile version